REPORTS OF 2011-12

I.t @school Projectನ ವಿನೂತನ ಹಾಗೂ ಐತಿಹಾಸಿಕ ಕಾರ್ಯಕ್ರಮವಾದ ಮಕ್ಕಳಿಗೋಸ್ಕರ ಆನಿಮೇಶನ್ ತರಬೇತಿ ಶಿಬಿರವು ಓಣಂ ರಜೆಯ 5/9/2011 ರಂದು ಆರಂಭಗೊಂಡು 6,7, 17/9/2011 ರಂದು ಕೊನೆಗೊಂಡಿತು. 5/9/2011 ರಂದು ಬೆಳಿಗ್ಗೆ 10 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಮನೋರಮಾ ಟೀಚರ್ ಮಾತನಾಡಿ I.t @school Project ನ ವತಿಯಿಂದ ನಡೆಯುವ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆಯುವಂತೆ ಕರೆ ಕೊಟ್ಟು,ಎಲ್ಲರಿಗೂ ಯಶಸ್ಸನ್ನು ಕೋರಿದರು.ಸಭೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರು ಉಪಸ್ಥಿತರಿದ್ದು ಶುಭವನ್ನು ಕೋರಿದರು. ಆ ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪೂರ್ಣಯ್ಯ ಪುರಾಣಿಕ ಹಾಗೂ ಶ್ರೀಮತಿ ಪರಮೇಶ್ವರಿ.ಎಚ್ ಇವರು ತರಗತಿಗಳನ್ನು ನಡೆಸಿ ಕೊಟ್ಟರು.ಸುಮಾರು 30 ವಿದ್ಯಾರ್ಥಿಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
17/9/2011 ರಂದು ಸಂಜೆ ನಡೆದ ಸರಳ ಸಮಾರೋಪ ಸಮಾರಂಭದಲ್ಲಿ ಶೈಲಜಾ ಕಾಮತ್, ಹಿರಿಯ ಅಧ್ಯಾಪಕಿಯವರು ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಹಾರೈಸುವುದರೊಂದಿಗೆ I.t @school Project ನವರು ಕೊಡಮಾಡಿದ ಪ್ರಶಸ್ತಿ ಪತ್ರಗಳನ್ನು ಶಿಬಿರಾರ್ಥಿಗಳಿಗೆ ವಿತರಿಸಿದರು.ಸಭೆಯಲ್ಲಿ ಹಾಜರಿದ್ದ ಶ್ರೀಮತಿ ಪರಮೇಶ್ವರಿ.ಎಚ್ ಹಾಗೂ ಶ್ರೀವಿದ್ಯಾ  ಟೀಚರುಗಳು ಮಕ್ಕಳಿಗೆ ಶುಭವನ್ನು ಹಾರೈಸಿದರು. ಬಹಳ ಸಂತೋಷದಿಂದ ಮಕ್ಕಳು ತಮ್ಮ ಮನೆಗಳಿಗೆ ತೆರಳಿದರು. ಉದಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಕೂಡಾ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ANIMATION TRAINING SNAPS

ANIMATION TRAINING MOVIE PART I

ANIMATION TRAINING MOVIE PART II

ANIMATION TRAINING MOVIE PART III

ANIMATION TRAINING MOVIE PART IV

Edited By:- Prashanth Kamath 9A & RAKSHITH 9A

LET US SALUTE OUR NATION WITH PRIDE

झोर सॆ बॊलॊ  ” जय हिंद “

विजयी विश्व तिरंगा प्यारा

“यॆ मॆरॆ प्यारॆ वतन तुझपॆ दिल कुरुबान “

ಎಸ್. ಎ.ಟಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
65 ನೇ ಸ್ವಾತಂತ್ರ್ಯ ದಿನಾಚರಣೆಯು ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟಿತು. ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರ ಭಟ್, ಮಾತನಾಡಿ ಹಿರಿಯರು ಕಷ್ಟಪಟ್ಟು ಒದಗಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎ೦ದು ತಿಳಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಫಾತಿಮತ್ ಝೌರ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಯು. ಅಬ್ದುಲ್ ರಹಿಮಾನ್,ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಸುದತಿ.ಬಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಅವರು ಸ್ವಾತಂತ್ರ್ಯದ ಶುಭ ಸಂದೇಶವನ್ನು ನೀಡಿದರು. ಆ ಬಳಿಕ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಕುಮಾರಿ ಕೀರ್ತಿ.ಕೆ ಮತ್ತು ಕವಿತಾ ಇವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್.ಎ.ಟಿ ಶಾಲೆಗಳ ವಿಧ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಕೌಟು ಮತ್ತು ಗೈಡ್ ದಳದ ವತಿಯಿಂದ ಬ್ಯಾಂಡ್ ಮೇಳ ಹಾಗೂ ಕವಾಯತು ಪ್ರದರ್ಶನ ಜರುಗಿತು.ಸಿಬ್ಬಂದಿ ಕಾರ್ಯದರ್ಶಿಯವರಾದ ಶ್ರೀ ಕಿರಣ್ ಕುಮಾರ್ ರವರು ಸ್ವಾಗತಿಸಿ, ಎಸ್.ಆರ್.ಜಿ ಕನ್ವೀನರ್ ರಾದ ಶ್ರೀ ವಿರೇಶ್ವರ ಭಟ್ ಧನ್ಯವಾದ ನೀಡಿದರು. ಶ್ರೀಮತಿ ಪ್ರಭಾ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು. ಆ ಬಳಿಕ ರಾಷ್ಟ್ರ ಗೀತೆ ಹಾಡಿ, ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು.

INDEPENDENCE DAY CELEBRATION VIDEO PART I

INDEPENDENCE DAY CELEBRATION VIDEO PART II

Edited by:- Ibrahim Sabith 9C

INDEPENDENCE DAY SNAPS

This slideshow requires JavaScript.

ಬಾವಲಿಯೇ ಬಾನಿನಲಿ

ನೀ ಹಾರಾಡುವೆಯಾ

ಹಗಲು ಹೊತ್ತಲಿ ಕಾಣದೆ

ಎಲ್ಲಿ ಅಡಗಿ ಕುಳಿತಿರುವೆಯಾ ?

ಕಂದು ದೇಹದ ಬಾವಲಿಯೇ

ಇಲಿಯಾಕಾರದ ಮುಖವನು

ನೀ ಹೊಂದಿರುವೆ

ವಿಕಾರ ರೂಪವು ನಿನ್ನದಾಗಿದೆ

ಅಗಲವಾದ ರೆಕ್ಕೆಯಲ್ಲಿ

ಹಾರಾಡುತ್ತಾ ಮಂಗನಂತೆ

ಮರದಲ್ಲಿ ನೇತಾಡುತ್ತಾ

ನಿದ್ರಿಸುವುದು ನೀನಲ್ಲವೇ ?

ಸಂಜೆಯ ಹೊತ್ತಲಿ ಆಹಾರ

ಹುಡುಕಲು ಹೊರಡುವೆ

ಹೀಗೆ ನಿನ್ನಯ

ಜೀವನ ಸಾಗಿಸುವೆ

ಮಾನವನ ಉಪಟಳ ತಡೆಯದೆ

ವಿದ್ಯುತ್ ತಂತಿಗೆ ಸಿಲುಕಿ

ಪ್ರಾಣವನ್ನು ಬಿಡುವೆಯಾ

ಇದು ನ್ಯಾಯವೆ , ಇದು ನ್ಯಾಯವೆ ?

ಪೂರ್ಣಶ್ರೀ.

ಎಸ್..ಟಿ ಶಾಲಾವತಿಯಿಂದ ಇನ್ಸಟೋಲ್ ಉತ್ಸವ

ಆದಿತ್ಯವಾರ ತಾ31/7/2011 ರಂದು ಎಸ್..ಟಿ ಶಾಲೆಯ ಐಟಿ ಕ್ಲಬ್ ನ ನೇತೃತ್ವದಲ್ಲಿ ಇನ್ಸಟೋಲ್ ಉತ್ಸವಎ೦ಬ ವಿನೂತನ ಕಾರ್ಯಕ್ರಮ ಮಚ್ಚಂಪಾಡಿ ಪರಿಸರದಲ್ಲಿ ಝುಬೈರ್ ಎ೦ಬವರ ಮನೆಯಲ್ಲಿ 11.00 ಗಂಟೆಗೆ ಸರಿಯಾಗಿ ಆರಂಭಗೊ೦ಡಿತು. ಝಬೈರ್ ಅವರು ನಮ್ಮ ಶಾಲೆಯ I.T ಕ್ಲಬ್ ಪದಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿಕೊ೦ಡು School Student I.T ಕೋರ್ಡಿನೇಟರಾದ ಇಬ್ರಾಹಿಂ ಸಾಬಿತ್ ರವರು ಎಡ್ ಬುಂಟು ಸಾಫ್ಟವೇರ್ ನ ಪ್ರತ್ಯೇಕತೆಗಳನ್ನು ಅವರಿಗೆ ವಿವರಿಸಿದರು. ಆ ಬಳಿಕ ಮೊಹಮ್ಮದ್ ಫರಾನ್, ಉಮ್ಮರ್ ಅಬ್ದುಲ್ ಅಸ್ಪಾಕ್ ಮತ್ತು ಮೊಹಮ್ಮದ್ ಸಫ್ವಾನ್ ರವರು ಎಡ್ ಬುಂಟು 10.4 ನ್ನು ಕಂಪ್ಯೂಟರ್ ನಲ್ಲಿ ಇನ್ ಸ್ಟೋಲ್ ಮಾಡಿ ಅದರ ಬಗ್ಗೆ ಸೂಕ್ಷ್ಮವಾದ ವಿವರಣೆಯನ್ನು ಇಬ್ರಾಹಿಂ ಸಾಬಿತ್ ನೀಡಿದರು. ಅಲ್ಲಿಂದ ಆಯಿಶ .K ಎ೦ಬ 10 A ತರಗತಿಯ ವಿಧ್ಯಾರ್ಥಿನಿಯ ಮನೆಗೆ ಹೋಗಿ ಅಲ್ಲಿಯೂ ಈ ಸೋಫ್ಟ ವೇರನ್ನು ಇನ್ಸ್ ಟೋಲ್ ಮಾಡಿಕೊಟ್ಟು ಅದರ ಪ್ರಯೋಜನ ಹಾಗೂ ಪ್ರವರ್ತನಾ ವಿಧಾನವನ್ನು ಸೂಕ್ಷ್ಮವಾಗಿ ವಿವರಿಸಲಾಯಿತು.ಆ ಬಳಿಕ ಶ್ರೀಮತಿ ವಸುಧಾಲಕ್ಶ್ಮೀ ಡಿ.ಎಮ್ ಟೀಚರ್ ರವರ ಮನೆಯಲ್ಲೂ ಹಾಗೂ ಇಬ್ರಾಹಿಂ ಖಲೀಲ್ 10 ನೇ ತರಗತಿ, ಜಿ.ವಿ.ಎಚ್.ಎಸ್.ಎಸ್, ಕುಂಜತ್ತೂರು ಇವರ ಮನೆಯಲ್ಲೂ ಇನ್ಸ್ಟಾಲ್ ಮಾಡಲಾಯಿತು.ಇವರೊಂದಿಗೆ ಶಾಲಾ ಐ.ಟಿ ಕೋರ್ಡಿನೇಟರ್ ರಾದ ಪೂರ್ಣಯ್ಯ ಪುರಾಣಿಕರು ಉಪಸ್ಥಿತರಿದ್ದರು. ಆ ಬಳಿಕ ಉಮ್ಮರುಲ್ ಅಬ್ದುಲ್ ಅಸ್ಪಾಕ್ ಧನ್ಯವಾದ ನೀಡುವುದ ರೊಂದಿಗೆ ಕಾರ್ಯಕ್ರಮ ಅಂತ್ಯ ಗೊಂಡಿತು. ಇದು ಇನ್ನು ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿದೆ.

UBUNTU 10.4 ನ್ನು  ಇನ್ಸ್ಟೋಲ್ ಮಾಡುತ್ತಿರುವ ಉಮ್ಮರ್ ಅಬ್ದುಲ್ ಅಸ್ಪಾಕ್ ಮತ್ತು ಮೊಹಮ್ಮದ್ ಫರ್ಹಾನ್ 9C

ಝುಬೈರ್ ರವರಿಗೆ ಪ್ರವರ್ತನಾ  ವಿಧಾನವನ್ನು ವಿವರಿಸುತ್ತಿರುವ ವಿಧ್ಯಾರ್ಥಿಗಳು


ಆಯಿಶಾ.ಕೆ 10A ಯ ಮನೆಯಲ್ಲಿ UBUNTU 10.4 ಇನ್ಸ್ಟಾಲ್ ಮಾಡುತ್ತಿರುವ ಇಬ್ರಾಹಿಂ ಸಾಬಿತ್,ಮೊಹಮ್ಮದ್ ಸಫ್ವಾನ್ , ಉಮ್ಮರ್ ಅಬ್ದುಲ್ ಅಸ್ಪಾಕ್ ಮತ್ತು ಮೊಹಮ್ಮದ್ ಫರ್ಹಾನ್ 9C

Inauguration of the valedictory function by Sri M.J.Kini

Sri M.J.Kini handovering the certificates to the trainers.

On behalf of all the participants Smt. Manjula Kini.M, hand overing contribution to the school to Sri Nithin Chandra Pai,Correspondent of the school.

Participants with the dignitaries

ಎಸ್..ಟಿ ಶಾಲೆಯಲ್ಲಿ ಉಚಿತ ಕಂಪ್ಯೂಟರ್ ಶಿಬಿರದ ಸಮಾರೋಪ

                ಎಸ್.ಎ.ಟಿ ಶಾಲೆಯಲ್ಲಿ ಉಚಿತ ಕಂಪ್ಯೂಟರ್ ಶಿಬಿರದ ಸಮಾರೋಪ ಸಮಾರಂಭವು ತಾ31/7/2011ರಂದು ಸಂಜೆ4.45 ಕ್ಕೆ ಸರಿಯಾಗಿ ಶಾಲಾ ಕಂಪ್ಯೂಟರ್ ಲ್ಯಾಬ್ ನಲ್ಲಿ ಜರಗಿತು.ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು, ಗೌಡ ಸಾರಸ್ವತ ಬ್ರಾಹ್ಮಣ ಸಂಘ,ರಥಬೀದಿ,ಮಂಜೇಶ್ವರ ಇದರ ಅಧ್ಯಕ್ಷರಾದ ಶ್ರೀ ಎಮ್.ಜೆ.ಕಿಣಿ ಇವರಿಂದ ಉದ್ಘಾಟಿಸಲ್ಪಟ್ಟು, ಕಂಪ್ಯೂಟರ್ ತರಬೇತಿಯ ಅವಶ್ಯಕತೆಯ ಬಗ್ಗೆ ಹೇಳಿದರು.ಶಿಬಿರಾರ್ಥಿಗಳು ಶಿಬಿರದ ಅನುಭವವನ್ನು ಸಭೆಯ ಮುಂದಿಟ್ಟರು.ಆ ಬಳಿಕ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.ಆ ಬಳಿಕ ಮಾತನಾಡಿದ ಶ್ರೀ ದಿನೇಶ್ ಶೆಣೈ,ಕೋಶಾಧಿಕಾರಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಂಘ,ರಥಬೀದಿ,ಮಂಜೇಶ್ವರ ಮಾತನಾಡಿ ಇನ್ನೂ ಹೆಚ್ಚು ಹೆಚ್ಚು ಕಂಪ್ಯೂಟರ್ ಶಿಬಿರಗಳನ್ನು ಸಂಘಟಿಸುವ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದರು.ಶ್ರೀ ಮತ್ ಅನಂತೇಶ್ವರ ದೇವಸ್ಥಾನ, ಮಂಜೇಶ್ವರ ಇದರ ಉಪಾಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈಯವರು ಮಾತನಾಡಿ ಮುಂದಿನ ದಿನಗಳಲ್ಲಿಯೂ ಇದನ್ನು ನಡೆಸುವ ಚಿಂತನೆ ಇದೆ ಎ೦ದರು.ಶ್ರೀ ದೇವಸ್ಥಾನದ ಮಂಜೇಶ್ವರ ಪೇಟೆಯ ಪ್ರತಿನಿಧಿಗಳಾದ ಶ್ರೀ ಪ್ರಕಾಶ್ ಭಟ್.ಎಮ್ ಹಾಗೂ ಶ್ರೀಮತಿ ಲಿಲ್ಲಿ ಟೀಚರ್ ಶುಭವನ್ನು ಕೋರಿದರು. ತರಗತಿಯನ್ನು ನಡೆಸಿದ ಶ್ರೀ ಪೂರ್ಣಯ್ಯ ಪುರಾಣಿಕರನ್ನು ಇದೇ ಸಂಧರ್ಭದಲ್ಲಿ ಶಿಬಿರಾರ್ಥಿಗಳು ತಮ್ಮವತಿಯಿಂದ ಸ್ಮರಣಿಕೆಯನ್ನು ಇತ್ತು ಅಭಿನಂದಿಸಿದರು.ಶ್ರೀ ಕಿಶೋರ್ ಶೆಣೈ,ಮಂಜೇಶ್ವರ ಇವರು ತಾವೇ ಸ್ವಂತ ರಚಿಸಿದ ಗಣಪತಿಯ ವಿಗ್ರಹದ ಫೋಟೊವನ್ನು ನೀಡಿ ಗೌರವಿಸಿದರು.ಶಿಬಿರಾರ್ಥಿಗಳಲ್ಲಿ ಒಬ್ಬರಾದ ಶ್ರೀ ಯಶವಂತ ಭಟ್ ಇವರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮವು ಕುಮಾರಿ ಶೈಲಜಾ ಕಾಮತ್ ಇವರ ಧನ್ಯವಾದದ ಬಳಿಕ ಮುಕ್ತಾಯಗೊಂಡಿತು. ಕಂಪ್ಯೂಟರ್ ತರಬೇತಿಯು ಉಬ್ಬುಂಟು 10.4ಎ೦ಬ ಸ್ವತಂತ್ರ ಸೋಫ್ಟವೇರ್ ನಲ್ಲಿ ನಡೆಯಿತು.ಸಂಜೆ 5.30ಕ್ಕೆ ಆರಂಭವಾದ ಶಿಬಿರವು 7.30ರ ತನಕ 15/7/2011ರಿಂದ 31/ 7/ 2011ರ ತನಕ ಹದಿನಾರು ದಿನಗಳ ಕಾಲ ನಡೆಯಿತು.

This slideshow requires JavaScript.

ರಕ್ತ ಗುಂಪು ನಿರ್ಣಯ ಶಿಬಿರ

ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿರುವ  ಎನ್.ಅಬ್ದುಲ್ ಹಮೀದ್

  ಅಧ್ಯಕ್ಷತೆಯಿಂದ ಮಾತನಾಡುತ್ತಿರುವ ಮುಖ್ಯೋಪಾಧ್ಯಾಯರಾದ ಉದಯ ಶಂಕರ್ ಭಟ್ 

ರಕ್ತ ಗುಂಪು ನಿರ್ಣಯದಲ್ಲಿ ತಲ್ಲೀನರಾಗಿರುವ  ಎನ್.ಅಬ್ದುಲ್ ಹಮೀದ್

ಮಂಜೇಶ್ವರ:ಮಂಜೇಶ್ವರ ಎಸ್..ಟಿ.ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಆಶ್ರಯದಲ್ಲಿ ರಕ್ತದ ಗುಂಪು ನಿರ್ಣಯ ಶಿಬಿರವು ಮಂಗಳವಾರ ಜರಗಿತು. ಹೊಸಂಗಡಿ ಪ್ರಿಯ ದರ್ಶಿನಿ ಮೆಡಿಕಲ್ ಟೆಕ್ನೋಲಜಿ ಮತ್ತು ಪ್ರಿಯ ದರ್ಶಿನಿ ಮೆಡಿಕಲ್ ಲ್ಯಾಬೋರೆಟರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಎನ್.ಅಬ್ದುಲ್ ಹಮೀದ್ ಚಾಲನೆ ನೀಡಿದರು.ಎಸ್..ಟಿ ಪ್ರೌಡ ಶಾಲಾ ಮುಖ್ಯೋಪಾಧ್ಯಾಯರಾದ ಉದಯ ಶಂಕರ್ ಭಟ್ ಅಧ್ಯಕ್ಷತೆ ವಹಿಸಿದರು.ಶಾಲಾ ಆಡಳಿತ ಮಂಡಳಿ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್,ಶಾಲಾ ಸಿಬ್ಬಂದಿ ಕಾರ್ಯ ದರ್ಶಿ ಕಿರಣ್ ಕುಮಾರ್,ಶಾಲಾ ಎಸ್.ಆರ್.ಜಿ ಸಂಚಾಲಕ ನಾರಾಯಣ ಹೆಗ್ಡೆ, ಸ್ಕೌಟ್ ಅಧ್ಯಾಪಕ ಶಿವಾನಂದ ಅರಿಬೈಲು,ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ.ಟಿ ಉಪಸ್ಧಿತರಿದ್ದರು. ಶಿಬಿರದಲ್ಲಿ ಸುಮಾರು 270 ಮಂದಿ ಮಕ್ಕಳು ಪಾಲ್ಗೊಂಡರು. ವಿಧ್ಯಾರ್ಥಿಗಳಾದ ಗಣೇಶ್ ನಾವಡ ಕಾರ್ಯಕ್ರಮ ನಿರೂಪಿಸಿದರು. ನೇತ್ರಾವತಿ ಸ್ವಾಗತಿಸಿ, ಬಿಂದು ಧನ್ಯವಾದ ನೀಡಿದರು.

ಎಸ್.ಎ.ಟಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಂಪ್ಯೂಟರ್ ತರಬೇತಿ ಶಿಬಿರ

                             ಐ.ಟಿ @ ಸ್ಕೂಲ್, ಕಾಸರಗೋಡು ಇದರ ನೇತ್ರತ್ವದಲ್ಲಿ ಎಸ್.ಎ.ಟಿ ಶಾಲೆಯಲ್ಲಿ ‘ಮಂಜೇಶ್ವರ ಉಪಜಿಲ್ಲಾ’ ಮಟ್ಟದ ಒಂದು ದಿನದ ಕಂಪ್ಯೂಟರ್ ತರಬೇತಿ ಶಿಬಿರವು ತಾ 13/7/2011 ರಂದು ಜರುಗಿತು. ಬೆಳಗ್ಗೆ 9.30 ಕ್ಕೆ ಉದ್ಘಾಟನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಶಂಕರ ಭಟ್ ಉದ್ಘಾಟಿಸಿ ಕಂಪ್ಯೂಟರಿನ ಜ್ಞಾನವನ್ನು ಹೆಚ್ಚಿಸುವಂತೆ ಕರೆ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಉದಯ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಗಣಪತಿ ಭಟ್ ಮತ್ತು ಕುಂಜತ್ತೂರು ಶಾಲೆಯ ಶ್ರೀಮತಿ ವತ್ಸಲ ಟೀಚರ್ ರವರು ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಯವರಾದ ಶ್ರೀ ಅಗಸ್ಟಿನ್ ಬರ್ನಾಡರು ತರಬೇತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಆ ಬಳಿಕ ಮಕ್ಕಳಿಗೆ ಕಂಪ್ಯೂಟರ್ ಜೋಡಣೆ ,ಎಸ್.ಎಸ್.ಐ.ಟಿ.ಸಿಯ ಜವಾಬ್ದಾರಿ,ಆಡಿಯೋ ರೆಕಾರ್ಡಿಂಗ್,ಡಿ.ವಿ.ಡಿಗಳ ತಯಾರಿಸುವಿಕೆ,ಫೈಲ್ ಶೇರಿಂಗ್ ಇತ್ಯಾದಿ ವಿಷಯಗಳ ಬಗ್ಗೆ ಶ್ರೀ ಅಗಸ್ಟಿನ್ ಬರ್ನಾಡ್ ಮತ್ತು ಶ್ರೀ ಪೂರ್ಣಯ್ಯ ಪುರಾಣಿಕರು ತರಗತಿಯನ್ನು ನಡೆಸಿಕೊಟ್ಟರು.ಬೇರೆ ಬೇರೆ ಶಾಲೆಗಳಿಂದ ಸುಮಾರು ಮುವ್ವತ್ತೆರಡು ಮಕ್ಕಳು ಬಾಗವಹಿಸಿದ್ದರು. ಸಂಜೆ ಸಮಾರೋಪ ಸಮಾರಂಭದೊಂದಿಗೆ ತರಬೇತಿ ಮುಕ್ತಾಯಗೊಂಡಿತು.       

ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿರುವ ಮುಖ್ಯೋಪಾಧ್ಯಾಯರು

ಭಾಗವಹಿಸಿದ ವಿಧ್ಯಾರ್ಥಿಗಳು

 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಉದಯ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು

ತರಬೇತಿ ನೀಡುತ್ತಿರುವ  ಅಗಸ್ಟಿನ್ ಬರ್ನಾಡ್

ಬಾವಲಿ ಬಾವಲಿ ಬಾವಲಿ

  ಬಾವಲಿ ಬಾವಲಿ ಬಾವಲಿ

 ಮುಸ್ಸ೦ಜೆ ಯಲ್ಲಿ ಕಾಣುವ ಬಾವಲಿ

 ಮರದಲ್ಲಿ ತೂಗಾಡುವ ಬಾವಲಿ

 ಹಣ್ಣುಗಳನ್ನು ಮೆಲ್ಲು ವ ಬಾವಲಿ

ವಿಕೃತಿ ರೂಪದ ಬಾವಲಿ                                      

ಕಪ್ಪು ಬಣ್ಣದ ಬಾವಲಿ

ಅಗಲ ರೆಕ್ಕೆಯ ಬಾವಲಿ

ಇಲಿಯ ಮುಖದ ಬಾವಲಿ

ಗೂಡಿಲ್ಲದೆ ತೂಗಾಡುವ ಬಾವಲಿ

ರಾತ್ರಿ ಕಾಲದಲ್ಲಿ ಸಂಚರಿಸುವ ಬಾವಲಿ

ಎತ್ತರದಲ್ಲಿ ಹಾರಾಡೊ ಬಾವಲಿ

ಗುಂಪಾಗಿ ಹಾರಾಡೊ ಬಾವಲಿ

ಎಲ್ಲಿ ಹೋದೆಯೊ ಎತ್ತ ಹೋದೆಯೊ

ಮಾಯವಾದೆಯೋ

ಅಳಿವಿನಂಚಿನಲ್ಲಿ ಸಾಗಿದ ಬಾವಲಿ

ಜೀವ ಸ ೦ಕುಲದ ಉಳಿವು

ಮಾನವನ ಉಳಿವು

ಮುಂದಾಗು ಬಾವಲಿಯ ಉಳಿವಿಗೆ

ಬಾವಲಿಯ ರಕ್ಷಣೆಗೆ ಸದಾ ಬದ್ಧರಾಗೋಣ

ಮನಿಷ 9C

ಕೆ.ಎನ್ ಪಣಿಕ್ಕರ್ ಸಂಸ್ಮರಣಾ ವಾಚನ ಸಪ್ತಾಹ ಸಂಭ್ರಮ

ಶ್ರೀಮತಿ ಮನೋರಮಾ ಟೀಚರ್  ಸಾಂಕೇತಿಕವಾಗಿ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕುತೂಹಲದಿಂದ ಪುಸ್ತಕ ಪ್ರದರ್ಶನವನ್ನು ವೀಕ್ಷಿಸುತ್ತಿರುವ ವಿಧ್ಯಾರ್ಥಿಗಳು.

ನಿವೇದನೆ

ಓ ಮನುಜ ಮೊದಲು ನೀ

ಮಾನವನಾಗು

ನಿನ್ನನ್ನು ನೀ ಅರಿತುಕೋ

ನಿನ್ನ ಈ ಕೆಟ್ಟ ಕೆಲಸದಿ

ನಿನ್ನ ಬಾಳಿಡಿ ಗೋಳು

ಮೊದಲು ನೀ ತಿಳಿದುಕೋ

ನನ್ನ ಈ ಮೂರು ದಿನದ ಆಟದಿ

ನೀ ಯಾಕೆ ? ಮದ್ಯಪಾನ

ಮರಿಜುವಾನಾ ಕೆಪೀನ್ ಗಳ

ಮದ್ಯೆ ನಿನ್ನ ಜೀವನವನ್ನು

ಯಾಕೆ ಅಡವಿಟ್ಟೆ

ಆದರಿಂದ ಬಿಡುಗಡೆ

ಹೊಂದಿ ಬಾ

ಮಾದಕ ದ್ರವ್ಯಗಳು

ನಿನ್ನನ್ನು ಸೆಳೆಯುತ್ತಿದೆಯೇ ?

ಸೆಳೆದ ವಸ್ತು ನಿನ್ನನ್ನು

ಮರು ಮಣ್ಣಿಗೆ ಕಳುಹಿಸಲು

ಯತ್ನಿಸುತ್ತಿದೆಯೇ….

ನಿನಗೆ ಬೇಕೇ ಈ ಪಿಡುಗು

ನಿಲ್ಲಿಸಿ ಬಿಡು ನಿನ್ನ ಈ ಹಟವ

                                                                                                                               ವಿನುತಶ್ರೀ X C

ಮದ್ಯಪಾನ

ಚಿಂತೆಯಲಿ ಒದ್ದು ನೀ

ಚೇಳು ಕುಟುಕಿದ ಮಂಗನಂತೆ

ವಿಲವಿಲನೆ ಒದ್ದಾಡುದೇಕೆ ? ಎಲೇ ಮಾನವ

ನೀನುಟ್ಟ ಬಟ್ಟೆಯನ್ನು

ಬತ್ತಲೆಯಾಗಿ ಹೊಂಡಕ್ಕೆ ಬಿದ್ದಿಯೇನು

ಎಲೇ ಮಾನವ!

ಕಷ್ಟ ಸುಖ ನಾಣ್ಯದ ಎರಡು ಮುಖ

ಸುಖ ಬಂದಾಗ

ಸಹ ಬಾಂಧವರೊಂದಿಗಂಚಿ

ಕಷ್ಟ ಬಂದಾಗ ಮದ್ಯಪಾನವು

ಕಷ್ಟವನ್ನು ಕೂಡಾ ಸಹ ಬಾಂಧವರೊಂದಿಗೆ

ಹಂಚಿಕೋ

ನೀನು ಕುಡಿದರೆ ಅದು

ನಿನಗೆ ಸಹಾಯ ಮಾಡುವುದೇ ?

ಯೋಚನೆಗಿಂತ ಮೇಲಿಲ್ಲ

ಮನುಷ್ಯನ ಬುದ್ಧಿವಂತಿಕೆ

ಮದ್ಯಪಾನದ ದಾಸನಾಗದಿರಲು ನೀ

ಅದರ ವಿರುದ್ಧ

ಅದನ್ನು ಮೆಟ್ಟಿ ನಿಲ್ಲು

ಆರೋಗ್ಯವೇ ಭಾಗ್ಯವೆಂಬ

ಮಾತು ಜಗದಲ್ಲೆಡೆ ಸಾರು.

Vinuthashree

X C

SCHOOL LORE

MY ENGLISH TEACHER

 It so happened when I was studying in fifth standard. One day our English teacher did not come to class. He was a rude man. He used to beat the student with cable. There was a boy whom we hate named Karthesh. He announced loudly that “Today Louis sir is not coming to the class”.When he said this fast it became “loose” sir. After some time later Louis sir came to the class and some boy complained to the sir about Karthesh announcement. He beat him with cable. He cried a lot. From here onwards every body started to call him a “loose” sir. After two months later he got promotion as headmaster and went to Kayyar school the name which the students kept was also followed with him to Kayyar school.

Ranjith.kX A Std

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: