ಶೈಕ್ಷಣಿಕ ಸಂಘಗಳ ಉದ್ಘಾಟನೆ 2013-2014

DSCF0385

ಶೈಕ್ಷಣಿಕ ಸಂಘಗಳ ಉದ್ಘಾಟನೆಯು ಈ ದಿನ ಮಂಜೇಶ್ವರ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ಶ್ರೀ ಬಿಜುಲಾಲ್ ಇವರಿಂದ ಉದ್ಘಾಟಿಸಲ್ಪಟ್ಟಿತು. ಆ ಬಳಿಕ ಮಾತನಾಡಿದ ಆವರು ಐತಿಹಾಸಿಕವಾದ ಈ ಶಾಲೆಯ ಗೌರವವನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಶೈಕ್ಷಣಿಕ ಸಂಘಗಳ ಚಟುವಟಿಕೆಗಳಲ್ಲಿ ಒಳ್ಳೆಯ ರೀತಿಯಲ್ಲಿ ಭಾಗವಹಿಸಿ ಆದರ ಸದುಪಯೋಗವನ್ನು ಪಡೆಯುವಂತೆ ಕರೆ ನೀಡಿದರು. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಪೋಲಿಸರ ಸಹಾಯವನ್ನು ಕೂಡಾ ವಾಗ್ದಾನ ಮಾಡಿದರು.ಸಕಲರೂ ಕೂಡಾ ಸಂಘಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಆಗಬೇಕೆಂದು ಮುಖ್ಯೋಪಾಧ್ಯಾಯರು ಹೇಳಿದರು. ಸಭೆಯಲ್ಲಿ ಶ್ರೀ ಕಿರಣ್ ಕುಮಾರ್, ಶ್ರೀ ನಾರಾಯಣ ಗೋಪಾಲಕೃಷ್ಣ ಹೆಗಡೆ,ಶ್ರೀಮತಿ ಸುಮನ ಐಲ್ ಉಪಸ್ಥಿತರಿದ್ದರು.ಬೇರೆ ಬೇರೆ ಸಂಘಗಳ ಸದಸ್ಯರು ತಮ್ಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಶ್ರೀ ಮುರಳೀ ಕೃಷ್ಣ.ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.

All school club activities were inaugurated in our school by Sri Bijulal,Sub-Inspector of Police,Manjeshwar Police station on 26-6-2013 at Anantha Vidya Auditoriam. He adviced all the students to join all the club and to show show their hidden talents. He also assured all supports from the police department during any problems. He also stressed the fact that it is the duty of every student to uphold the dignity and respect of this historical institution. Headmaster Sri Udaya shankara Bhat also wished all success to the activities of all the clubs. Sri Kiran Kumar, Sri Narayana Gopalakrishna Hegde,Smt Sumana Ailwere present in the programme. The members of the different club performed different programmes in the presence of the Chief guests. Sri Muralikrishna .N moderated the programme.

INAUGURATION OF ALL CLUB ACTIVITIES 2013 SNAPS

Aside

ಪ್ರತಿಭಾ ಪುರಸ್ಕಾರ ಮತ್ತು ಸಮವಸ್ತ್ರ ವಿತರಣೆ

00061

ಎಸ್. . ಟಿ ಪ್ರೌಢ ಶಾಲೆ,ಮಂಜೇಶ್ವರದಲ್ಲಿ ಶ್ರೀಮದ್ ಅನಂತೇಶ್ವರ ದೇವಳದ ಆಡಳಿತ ಮಂಡಳಿಯ ವತಿಯಿಂದ ಕಳೆದ ಸಾಲಿನ 10ನೇ ತರಗತಿಯ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ 8 ಮಂದಿ ವಿದ್ಯಾರ್ಥಿಗಳಿಗೆ ಪತಿಭಾ ಪುರಸ್ಕಾರ ನಡೆಯಿತು. ಈ ಸಂದರ್ಭದಲ್ಲಿ 5ನೇ ತರಗತಿಯ ಕನ್ನಡ ಮಾಧ್ಯನದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ವತಿಯಿಂದ ಉಚಿತ ಸಮವಸ್ತ್ರ ವನ್ನು ವಿತರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಡಾ. ಅನಂತ ಕಾಮತ್ ರವರು ತಮ್ಮ ಮಾತುಗಳಲ್ಲಿ ವಿದ್ಯಾರ್ಥಿಗಳು ಶೃದ್ದೆ ಭಕ್ತಿ ಯಿಂದ ,ಹಿರಿಯರ ಮತ್ತು ಅಧ್ಯಾಪಕರ ಮಾರ್ಗದರ್ಶನವನ್ನು ಪಡೆದಲ್ಲಿ ಉತ್ತಮ ಗುರಿಯನ್ನು ಸಾದಿಲು ಸಾಧ್ಯ ಎ೦ದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವೇದವ್ಯಾಸ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಮದ್ ಅನಂತೇಶ್ವರ ದೇವಳದ ಶಾಲೆಗಳ ಪ್ರಬಂಧಕರಾದ ದಿನೇಶ್ ಶೆಣೈಯವರು ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಕೊಂಡಲ್ಲಿ ಉತ್ತಮ ಪಲಿತಾಂಶ ಪಡೆಯಲು ಸಾದ್ಯವಿದೆ ಎ೦ದರು. ಕಾರ್ಯಕ್ರಮದಲ್ಲಿ ವಿಠಲ್ ದಾಸ್ ಭಟ್ ,ಯೊಗೀಶ್ ಡಿ. ಪ್ರಭು, ಸುಬ್ರಾಯ ಹೆಗಡೆ, ರಾಜೇಶ್ ಪೈ ಇವರು ಶುಭವನ್ನು ಹಾರೈಸಿದರು. ಸಮಾರಂಭದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದಉದಯ ಶಂಕರ್ ಭಟ್ ಸ್ವಾಗತಿಸಿ,ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್ ವಂದಿಸಿದರು, ದೈಹಿಕ ಶಿಕ್ಷಕರಾದ ಶ್ಯಾಮ ಕೃಷ್ಣ ಪ್ರಕಾಶ್ ಕಾರ್ಯಕ್ರಮ ವನ್ನು ನಿರೂಪಿಸಿದರು.

Honouring the S.S.L.C Top scorers and Distribution of uniforms

As a part of honouring the students of S.S.L.C top scorers in S.S.L.C, the present management committee honoured 8 students by presenting them a memento. At the same time uniform clothes were distributed to the students of 5th standard kannada medium. The function was presided over by Sri Dr.Anantha Kamath. Chief guest Sri Vedavyas inaugurated the programme by lighting the lamp. School Manager Sri M.Dinesh Shenoy advised them to take all the opportunities for attaining good quality education. Sri Vittal Das Bhat,Sri Yogesh.D.Prabhu, Sri Subraya Hegde,Sri Rajesh Pai were present during the programme and felicitated the programme. High School Headmaster Sri Udaya Shankara Bhat welcomed all and L.P Headmistress Smt Sudathi.B gave vote of thanks. The programme was moderated by Sri Shyama Krishna Prakash M.G.

SNAPS OF THE ABOVE PROGRAMME

World Environment Day in our school

00072

ಎಸ್. . ಟಿ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

                   ಎಸ್. . ಟಿ. ಪ್ರೌಢ ಶಾಲೆ ಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರಗಿತು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಮುಖ್ಯ ಅತಿಥಿಯಾಗಿ ಮಂಜೇಶ್ವರ ಕೃಷಿಭವನದ ಕೃಷಿ ಅಧಿಕಾರಿಯಾದ ಶ್ರೀಮತಿ ರಜಿತಾ ಅವರು ಅರಣ್ಯ ಇಲಾಖೆಯವರು ನೀಡಿದ ಗೀಡಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳು ಪರಿಸರವನ್ನು ಸಂರಕ್ಷಣೆಯನ್ನು ಮಾಡಬೇಕಾದ ಮಹತ್ವ ವನ್ನು ತಿಳಿಸಿದರು.ಶಾಲೆಯ ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯೆಯಾದ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಪರಿಸರವನ್ನು ರಕ್ಷಿಸುವುದರ ಜೊತೆಗೆ ಅವುಗಳನ್ನು ಶುಚಿಯಾಗಿರಿಸಿಕೊಂಡಲ್ಲಿ ಉತ್ತಮ ಆರೊಗ್ಯವಂತ ಸಮಾಜ ಉಂಟಾಗಲು ಸಾದ್ಯಎ೦ದು ತಿಳಿಸಿದರು. ಎಸ್. . ಟಿ. ಪ್ರೌಢ ಶಾಲೆ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ನಿಖಿತಾ ಪೈ , ಕಿರಿಯ ಪ್ರಾಥಮಿಕ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುತ್ತಬ್ಬ ಹಾಗೂ ಕೃಷಿ ಇಲಾಖೆಯ ಸಹಾಯಕ ಸಿಬ್ಬಂದಿ ಬಾಬು ಇವರು ಶುಭಹಾರೈಸಿದರು. ಶಾಲೆಯ ಮುಖೋಪಾಧ್ಯಾಯರಾದ ಉದಯ ಶಂಕರ ಭಟ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಜೀವನದಲ್ಲಿಯೇ ಪರಿಸರವನ್ನು ಸಂರಕ್ಷಿಸುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯವಂತ ವಾತವರಣ ನಿರ್ಮಾಣವಾಗಲು ಸಾದ್ಯ ಎ೦ದು ತಿಳಿಸಿದರು.ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಗಳು ಹಾಡಿದ ಪರಿಸರ ಗೀತೆ ಉತ್ತಮವಾಗಿ ಮೂಡಿಬಂತು. ಶಿಕ್ಷಕ ಜಿ. ವಿರೇಶ್ವರ ಭಟ್ ವಿದ್ಯಾರ್ಥಿಗಳಿಂದ ಘೋಷಣವಾಕ್ಯವನ್ನು ಹೇಳಿಸಿದರು.ಈ ಸಂದರ್ಭದಲ್ಲಿ ಕಳೆದ ವರ್ಷ ಶಾಲೆಯಲ್ಲಿ ಉತ್ತಮವಾಗಿ ತರಕಾರಿ ತೋಟಮಾಡಲು ಸಹಕರಿಸಿದ 20 ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನವನ್ನು ನೀಡಿ ಪ್ರೋತ್ಸಹಿಸಲಾಯಿತು. ಶಾಲೆಯ ಪರಿಸರ ಸಂಘದ ಸಂಚಾಲಕರಾದ ಕಿರಣ್ ಕುಮಾರ್ ಸ್ವಾಗತಿಸಿ, ಕಿರಿಯ ಪ್ರಾಥಮಿಕ ವಿಭಾಗದ ಮುಖೋಪಾಧ್ಯಾಯಿನಿ ಸುದತಿ ಟೀಚರ್ ಧನ್ಯವಾದವನ್ನು ನೀಡಿದರು, ದೈಹಿಕ ಶಿಕ್ಷಕರಾದ ಶ್ಯಾಮ ಕೃಷ್ಣ ಪ್ರಕಾಶ್ ಕಾರ್ಯಕ್ರವನ್ನು ನಿರೂಪಿಸಿದರು.

World Environment Day in our school

World environment day was celebrated in our school on 5th June and it was started with the school prayer. Manjeshwar Krishi Bhavan officer Smt. Rajitha inaugurated the programme by distributing the plants provided by the forest department. She addressed the students on the importance of the conservation of forests. School advisory committee member Smt.Lilly Bai stressed the need for keeping the surroundings clean. H.S section and L.P section P.T.A Presidents Smt. Nikhitha Pai and Sri Puthabba gave felicitations respectively. Krishi Bhavan Office Assistant Sri Babu encouraged the students by his speech. In Presidential address Headmaster Sri Udaya Shankara Bhat advised the students to make it a habit of planting trees during student life itself. 6th standard students sang environmental song. Sri G.Vireshwar Bhat taught students some slogans regarding the preservation of forests. Prizes were awarded to the 20 students who performed well in maintaining vegetable garden in the last academic year. Sri Kiran Kumar welcomed the gatherings, Smt Sudathi teacher gave vote of thanks and Sri Shyama Krishna Prakash moderated the programme.

SNAPS OF WORLD ENVIRONMENT DAY

ಪ್ರವೇಶೋತ್ಸವ 2013-2014

2013-06-03 11.05.29

S.A.T L.P SCHOOL PRAVESHOTSAVAM

00009

School Praveshotsavam Programme Snaps

 

ಮಂಜೇಶ್ವರ ಜೂನ್ 3 :- ಸ್ಥಳೀಯ ಎಸ್. . ಟಿ ಪ್ರೌಢ ಶಾಲೆಯ ಪ್ರವೇಶೋತ್ಸವ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು.ನೂತನವಾಗಿ ದಾಖಲಾದ ಮಕ್ಕಳನ್ನು ಗಣ್ಯ ಅತಿಥಿಗಳೊಂದಿಗೆ ಶಾಲಾ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿನ ಉಪಾಧ್ಯಕ್ಷರಾದ ಹರ್ಷಾದ್ ವರ್ಕಾಡಿಯವರು ಮಕ್ಕಳಿಗೆ ಲೇಖನಿಗಳನ್ನು ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಹೆತ್ತವರು ಮಕ್ಕಳೊಂದಿಗೆ ಸದಾ ಹತ್ತಿರವಿದ್ದು ಶಾಲಾ ಚಟುವಟಿಕೆಗಳಿಗೆ ಸಹಕಾರ ನೀಡಬೇಕೆಂದು ಕಡ್ಡಾಯ ಶಿಕ್ಷಣ ಜ್ಯಾರಿಗೆ ಸಹಕರಿಸಬೇಕೆಂದು ತಿಳಿಸಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಹಳೆ ವಿದ್ಯಾರ್ಥಿಯೂ ಶ್ರೀಮದ್ ಅನಂತೇಶ್ವರ ದೇವಳದ ಪ್ರತಿನಿಧಿಯೂ ಆದ ವಿಠಲದಾಸ್ ಭಟ್ ಅವರು ಮಕ್ಕಳಿಗೆ ಶುಭಕೋರಿದರು. ನೂತನವಾಗಿ ದಾಖಲಾದ 5 ನೇ ತರಗತಿಯ ಮಕ್ಕಳಿಗೆ ಉಚಿತ ವಾಗಿ ಸಮವಸ್ತ್ರವನ್ನು ಆಡಳಿತ ಮಂಡಳಿಯ ವತಿಯಿಂದ ನೀಡುವುದಾಗಿ ಘೋಷಿಸಿದರು. ಶಾಲಾ ರಕ್ಷಕ ಶಿಕ್ಷಕಸಂಘದ ಅಧ್ಯಕ್ಷೆಯಾದ ಶ್ರೀಮತಿ ನಿಖಿತಾ ಪೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯೆಯಾದ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,ಶಾಲಾ ಮುಖ್ಯೋಪಾಧ್ಯಾಯರಾದ ಉದಯಶಂಕರ ಭಟ್ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಶಾಲಾ ಸಿಬ್ಬಂದಿ ವರ್ಗದ ಕಾರ್ಯದರ್ಶಿ ಎನ್ ಜಿ. ಹೆಗಡೆ ಯವರು ಸ್ವಾಗತಿಸಿದರು. ಶಿಕ್ಷಕ ಕಿರಣ್ ಕುಮಾರ್ ವಂದಿಸಿದರು. ಶಿಕ್ಷಕ ಜಿ ವೀರೇಶ್ವರ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೊನೆಯಲ್ಲಿ ಎಲ್ಲಾ ಮಕ್ಕಳಿಗೂ ಸಿಹಿ ಹಂಚಲಾಯಿತು.

School Praveshotsavam Programme

School Praveshotsavam Programme was conducted in S.A.T High school,Manjeshwar on June 3rd 2013 at Anantha Jnana Multi-Media hall. Newly admitted pupils were welcomed through the school band mela with the chief guests of the function. Hon. Vice President of Manjeshwar Block Panchayath Sri Harshad Vorkady inaugurated the function by distributing pens to the students. In his inaugural address he requested the parents to be always with the students and to encourage them in school activities. Shri Math Anantheshwar Temple,Manjeshwar Pete member Sri Vittal Das Bhat gave his felicitations to the students. He also announced that the temple committee will sponsor uniform to the newly admitted pupils of Vth standard. P.T.A.President Smt Nikhitha Pai and advisory committee member Smt Lilly Bai.M addressed the gatherings. School headmaster Sri udayashankara Bhat gave key note address. Staff secretary Sri Narayana Gopalakrishna Hegde welcomed the gatherings and Sri Kiran Kumar gave vote of thanks. The programme was moderated by Sri G.Vireshwara Bhat.

ಎಸ್.ಎ.ಟಿ ಶಾಲೆಯ ಸು೦ದರ ತುಳಸೀ ಹಾಗೂ ಗೌರಿ ಹೂವಿನ ವನ

 

 

 

 

This slideshow requires JavaScript.

ಎಸ್.ಎ.ಟಿ ಶಾಲೆಯಲ್ಲಿ  ಸು೦ದರ ತುಳಸೀ ವನವು ಮೈತಳೆದು ನಿ೦ತು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ.ಶಿಕ್ಷಕೇತರ ಸಬ್ಬ೦ದಿಯ ಸಹಕಾರದೊ೦ದಿಗೆ ಶ್ರೀ ವಾಸುದೇವ ಕಾಮತ್ ರವರು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಸುಮಾರು 50 ರಷ್ಟು ತುಳಸೀ ಮಾಲೆಯು ಶ್ರೀ ಮತ್ ಅನ೦ತೇಶ್ವರ ದೇವರಿಗೆ ಹಾಗೂ ಶ್ರೀ ಕಲ್ಪವೃಕ್ಷ ಮಹಾಮಾಯಾ ಅಮ್ಮನವರಿಗೆ ಅರ್ಪಿತವಾಗಿದೆ ಎನ್ನಲು ಸ೦ತೋಷವಾಗುತ್ತಿದೆ.

ಪ್ರೀ ನರ್ಸರಿ ಶಾಲಾ ಉದ್ಘಾಟನೆ

This slideshow requires JavaScript.